ಗಂಡ-ಹೆಂಡತಿ ನಡುವಿನ ಸಂಬಂಧ ಅನ್ನೋದು ತುಂಬಾ ಮಹತ್ವದ್ದು. ನೂರಾರು ಬಾರಿ ಯೋಚಿಸಿ ಒಬ್ಬರ ಬಾಳಲ್ಲಿ ಪ್ರವೇಶ ಮಾಡುವ ನಿರ್ಧಾರ ತೆಗೆದುಕೊಳ್ಳುತ್ತಾರೆ. ಮೊದ-ಮೊದಲು ಪ್ರೀತಿ ಉಕ್ಕಿ ಹರಿಯುತ್ತಿರುತ್ತದೆ ನಂತರ ಹಾವು-ಮುಂಗುಸಿ ತರ ಕಚ್ಚಾಡುತ್ತಾರೆ. ತಮ್ಮ ಸಂಬಂಧ ಅನೋನ್ಯತೆಯಿಂದ ಕೂಡಿರಬೇಕು ಎಂದು ಪ್ರತಿಯೊಬ್ಬರು ಇಷ್ಟಪಡುತ್ತಾರೆ. ಆದರೆ ಅದು ಸುಲಭದ ವಿಚಾರ ಅಲ್ಲ. ಆದರೆ ಸದಾ ಪ್ರೀತಿಯ ಜೊತೆ ಕೆಲವು ಅಂಶಗಳನ್ನು ನೆನಪಿನಲ್ಲಿಟ್ಟುಕೊಂಡರೆ ಗಂಡ-ಹೆಂಡತಿ ಸಂಬಂಧ ಗಟ್ಟಿಯಾಗಿ ಉಳಿಯುತ್ತದೆ.
ಸಂಗಾತಿಯ ಭಾವನೆ ಗೌರವಿಸಿ:
ಪ್ರತಿಯೊಂದು ಸಂಬಂಧಗಳಲ್ಲಿ ಭಾವನೆಗಳು ತುಂಬಾ ಮುಖ್ಯ. ಅದರಲ್ಲಿ ದಂಪತಿಯ ನಡುವೆ ಇದು ತುಂಬಾ ಮಹತ್ವದ ಪಾತ್ರ ವಹಿಸುತ್ತದೆ. ನಿಮ್ಮ ಸಂಗಾತಿಯ ಭಾವನೆಗಳನ್ನು ಗೌರವಿಸುವುದನ್ನು ಮೊದಲು ಕಲಿಯಬೇಕು. ಒಂದು ವೇಳೆ ಅವರ ಭಾವನೆಯನ್ನು ನೋಯಿಸಿದರೆ ತಕ್ಷಣ ಕ್ಷಮೆಕೇಳಿ ಬಿಡಿ. ಹಾಗೂ ಯಾವುದೇ ಸಂದರ್ಭದಲ್ಲಿಯೂ ಸಹ ನಿಮ್ಮ ಸಂಗಾತಿಯೊಂದಿಗೆ ಪರವಾಗಿ ನಿಲ್ಲಿ, ಎಂದಿಗೂ ಅವರನ್ನು ಬಿಟ್ಟುಕೊಡಬೇಡಿ. ಇದರಿಂದ ನಿಮ್ಮ ಸಂಬಂಧವು ಮತ್ತಷ್ಟು ಬಲಗೊಂಡು ಪರಸ್ಪರ ಪ್ರೀತಿ ಹೆಚ್ಚಾಗುತ್ತದೆ.
ಉತ್ತಮ ಸ್ನೇಹಿತರಾಗಿ:
ನಿಮ್ಮ ಜೀವನದಲ್ಲಿ ಸಂಗಾತಿಯು ಪ್ರಮುಖ ಪಾತ್ರ ವಹಿಸುತ್ತಾರೆ. ನಿಮ್ಮ ಹೊಸ ಬಾಳಿನ ಹಾದಿಯಲ್ಲಿ ಅವರು ಸದಾ ಜೊತೆ ನಡೆಯುತ್ತಾರೆ. ಹೀಗಾಗಿ ಅವರಿಗೆ ತುಂಬಾ ಪ್ರಾಮುಖ್ಯತೆ ಕೊಡಿ. ಅವರೊಂದಿಗೆ ಸ್ನೇಹಿತರಂತೆ ಇದ್ದು, ನಿಮ್ಮ ಪ್ರತಿಯೊಂದು ಸಣ್ಣ-ಪುಟ್ಟ ವಿಚಾರಗಳನ್ನು ಅವರೊಂದಿಗೆ ಹಂಚಿಕೊಳ್ಳಿ. ಸಂತೋಷ ಮತ್ತು ದುಃಖವನ್ನು ಹಂಚಿಕೊಳ್ಳುತ್ತಿರಿ. ನಿಮ್ಮ ಚಿಂತೆಗೆ ಕಾರಣವಾದ ವಿಷಯಗಳನ್ನೂ ಸಹ ಅವರಿಗೆ ತಿಳಿಸಿ. ಇದು ನಿಮ್ಮ ಒತ್ತಡವನ್ನು ಕಡಿಮೆ ಮಾಡುವುದರ ಜತೆ ಮತ್ತು ನೀವು ಅವರನ್ನು ಎಷ್ಟು ನಂಬಿದ್ದೀರಿ ಎಂದು ತಿಳಿಸುತ್ತದೆ.
ಪರಸ್ಪರ ನಂಬಿಕೆ ಇರಲಿ:
ಒಟ್ಟಾರೆ ಹೇಳುವುದಾದರೆ ಏನೇ ಸಣ್ಣ-ಪುಟ್ಟ ಸಮಸ್ಯೆ ಇದ್ದರೂ ಅದು ನಿಮ್ಮ ನಡುವೆ ಪರಿಹರಿಸಿಕೊಂಡು ಜೀವನ ಸಾಗಿಸಬೇಕು. ಯಾವುದಕ್ಕೂ ಸಿಡುಕದೇ ಪ್ರೀತಿಯಿಂದ ಇದ್ದಾಗ ಇಬ್ಬರ ಸಂಬಂಧ ಇನ್ನಷ್ಟು ಗಟ್ಟಿಯಾಗುತ್ತದೆ.